ಜೀವನವಿವರ
ಎಲ್. ಎಸ್. ಶೇಷಗಿರಿ ರಾವ್
ಎಲ್. ಎಸ್. ಶೇಷಗಿರಿ ರಾವ್ ಅವರ ಜೀವನ ವಿವರ
ಜನನ : ೧೬ -೦೨ -೧೯೨೫, ಬೆಂಗಳೂರು
ನಿದನ : ೨೦ -೧೨ -೨೦೧೯, ಬೆಂಗಳೂರು
ತಂದೆ : ಎಲ್ ಸ್ವಾಮಿರಾವ್ (ಜಿಲ್ಲಾ ವಿದ್ಯಾಧಿಕಾರಿಗಳಾಗಿ ನಿವೃತ್ತಿ)
ಶಿಕ್ಷಣ : ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳಲ್ಲಿ ಬಿ ಎ ಆನರ್ಸ್ ಮತ್ತು ಎಂ ಎ ಪ್ರಥಮ ತರಗತಿ, ಪ್ರಥಮ ಸ್ಥಾನ, ಚಿನ್ನದ ಪದಕಗಳು ಹೈದರಾಬಾದಿನ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷಿನಲ್ಲಿ ವಿಶೇಷ ತರಬೇತಿ ಪ್ರೊ. ಶೇಷಗಿರಿ ರಾಯರು ತಮ್ಮ ವಿದ್ಯಾರ್ಥಿ ವರ್ಗಕ್ಕೆ ಬಹು ಪ್ರಿಯರಾದ ಅಧ್ಯಾಪಕರು. ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದವರು. ಚಳುವಳಿಗಳಲ್ಲಿ ಭಾಗವಹಿಸಿದಾಗ ಪೋಲಿಸ್ ಠಾಣೆಗಳಿಗೂ ಇವರನ್ನು ಕರೆದೊಯ್ಯಲಾಗಿತ್ತು.
ವೃತ್ತಿ : ೧೯೪೪ರಲ್ಲಿ (೧೯ನೆಯ ವಯಸ್ಸಿನಲ್ಲಿ) ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗಕ್ಕೆ ಉಪನ್ಯಾಸಕರಾಗಿ ಪ್ರವೇಶ.
ಹಲವು ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ, ೧೯೮೫ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದಿಂದ ನಿವೃತ್ತಿ.
೧೯೬೯ – ೧೯೭೧ : ಜ್ಞಾನ ಗಂಗೋತ್ರಿ ವಿಶ್ವಕೋಶ ಸಂಪಾದಕ
೧೯೮೦ – ೧೯೮೨ : ಕರ್ನಾಟಕದ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ
೧೯೮೬ – ೧೯೮೮ : ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಸಂಶೋಧನಾ ವೇತನ
೧೯೯೧ – ೧೯೯೩ : ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ
೧೯೯೩ – ೧೯೯೫ : ಕರ್ನಾಟಕ ರಾಜ್ಯದ ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲನೆಯ ಅಧ್ಯಕ್ಷ (ರಾಜ್ಯ ಸಚಿವರ ಸ್ಥಾನಮಾನ)