ಮುಖಪುಟ
ಎಲ್. ಎಸ್. ಶೇಷಗಿರಿ ರಾವ್
ಎಲ್.ಎಸ್. ಶೇಷಗಿರಿ ರಾವ್ ಬದುಕು; ಬರಹ-ಒಂದು ಸಮೀಕ್ಷೆ
ಪ್ರೊ. ಎಂ. ಎಚ್. ಕೃಷ್ಣಯ್ಯ ಇಂಗ್ಲಿಷ್ನಲ್ಲಿ (ಇಂಟರ್ಮೀಡಿಯೆಟ್ ಪರೀಕ್ಷೆ) ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದ ಹದಿನೇಳು ವರ್ಷದ ಬಾಲಕ. ಬಿ.ಎಸ್ಸಿ., ಬಿ.ಇ.ಗಳಲ್ಲೂ ಪ್ರವೇಶ ಸಿಕ್ಕಿದರೂ ಆರಿಸಿಕೊಂಡಿದ್ದು ಆ ವರ್ಷವೇ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪ್ರಾರಂಭಿಸಲಾಗಿದ್ದ ಇಂಗ್ಲಿಷ್ ಆನರ್ಸ್ ಕೋರ್ಸನ್ನು. ಪ್ರವೇಶಕ್ಕಾಗಿ ಸಂದರ್ಶನ, ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರ ಮುಂದೆ. ಆಗ `ಶ್ರೀ' ಅವರು ಕೇಳಿದ ಪ್ರಶ್ನೆ: ``ಆನರ್ಸ್ ಆದ ಮೇಲೆ ಏನು ಮಾಡಬೇಕೆಂದಿದ್ದೀರಿ?’’ ಬಾಲಕ ಸಹಜವಾಗಿ ನೀಡಿದ ಉತ್ತರ ``ಕೆಲಸಕ್ಕೆ ಸೇರಬೇಕೆಂದಿದ್ದೇನೆ.’’ ಆಗ `ಶ್ರೀ' ಅವರು ``ಅದಲ್ಲ, ಕನ್ನಡಕ್ಕೆ, ನಿಮ್ಮ ಭಾಷೆಗೆ ಯಾವ ರೀತಿಯ ಸೇವೆ ಸಲ್ಲಿಸಲು ಯೋಚಿಸಿದ್ದೀರಿ?’’ ಬಾಲಕ ಮೌನದಿಂದ ಇದ್ದದ್ದು ಕಂಡು ಅವರೇ ಉತ್ತರ ಹೇಳಿದರು: ``ನೀವು ಸಾನೆಟ್ ಬಗ್ಗೆ ಒಂದು ಲೇಖನ ಬರೆಯುತ್ತೀರಿ ಎಂದಿಟ್ಟುಕೊಳ್ಳಿ. ಅದನ್ನು ಇಂಗ್ಲೆಂಡಿನಲ್ಲೊ ಅಮೆರಿಕದಲ್ಲೊ ಯಾರೂ ಓದುವುದಿಲ್ಲ. ಅದನ್ನೇ ಕನ್ನಡದಲ್ಲಿ ಬರೆದರೆ ನಮ್ಮ ಜನ ನಿಮಗೆ ಕೃತಜ್ಞರಾಗಿರುತ್ತಾರೆ.’’ ಅಂದೇ ಬಾಲಕ ಮನಸ್ಸಿನಲ್ಲಿ ಕೈಗೊಂಡ ನಿರ್ಧಾರ, ಇಂಗ್ಲಿಷ್ ಪಾಠ ಹೇಳಿದರೂ ಬದುಕು ಮತ್ತು ಕೃಷಿ ಕನ್ನಡಕ್ಕೆ ಮೀಸಲು. ಆ ಬಾಲಕನೇ ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರು. ಶ್ರೀ ಅವರು ಹೇಳಿದಂತೆ ಕನ್ನಡ ಜನ ಅವರನ್ನು ಮರೆಯಲಿಲ್ಲ. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಲ್ಲಿಸಿದರು. ಹೆಚ್ಚಿನ ವಿವರಣೆ